ADD

Tuesday, 12 December 2017

GK

*ಕುಂಬಳಕಾಯಿ ಬೀಜವನ್ನು ಕಸದ ಬುಟ್ಟಿಗೆ ಎಸೆಯುವ ಮುನ್ನ ಇದನ್ನು ಓದಿದರೆ ಮತ್ತೆ ಎಂದೂ ಆ ಕೆಲಸ ಮಾಡುವುದಿಲ್ಲ..!*

*ಶಕ್ತಿವರ್ಧಕ ಕುಂಬಳಬೀಜ*

ಉಪ್ಪು-ಖಾರ ಹಾಕಿ ಹುರಿದ ಕುಂಬಳಕಾಯಿ ಬೀಜಗಳನ್ನು ಎಂದಾದರೂ ತಿಂದಿದ್ದೀರಾ? ಈಗಿನ ಮಕ್ಕಳಿಗೆ ಇದನ್ನು ಸವಿದ ಅನುಭವವೇ ಇರುವುದಿಲ್ಲ. ಅದರಲ್ಲೂ ಮಳೆ-ಚಳಿಗಾಲದಲ್ಲಿ ಹುರಿದ ಕುಂಬಳಕಾಯಿಯ ಬೀಜಗಳನ್ನು ಬಿಸಿಬಿಸಿಯಾಗಿ ತಿನ್ನುವುದು ಬಿಸಿ ಬೋಂಡ, ಬಜ್ಜಿ ತಿಂದಷ್ಟೇ ಬಾಯಿಗೆ ಹಿತಕರ. ಅಷ್ಟೇ ಅಲ್ಲ ದೇಹಕ್ಕೂ ಕೂಡ ಇದು ಒಳ್ಳೆಯದು.

ಇದನ್ನು ಪೆಪಿಟಾಸ್ ಎಂದೂ ಕರೆಯುತ್ತಾರೆ. ಈಗಿನ ದಿನಗಳಲ್ಲಿ ಈ ಬೀಜಗಳನ್ನು ಯಾರೂ ತಿನ್ನಲು ಇಚ್ಛಿಸುವುದಿಲ್ಲ. ಕುಂಬಳಕಾಯಿ ಬಳಸಿ, ಬೀಜವನ್ನು ಅನುಪಯುಕ್ತವೆಂದು ನಿರ್ದಾಕ್ಷಿಣ್ಯವಾಗಿ ಎಸೆಯುತ್ತಾರೆ. ಆದರೆ ಬೀಜ ಕೂಡ ಪೌಷ್ಟಿಕಾಂಶಭರಿತವಾಗಿದ್ದು ಹಲವಾರು ಆರೋಗ್ಯಕರ ಅಂಶಗಳಿಂದ ಕೂಡಿದೆ.

ನಿಯಮಿತವಾಗಿ ಇದನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್, ರಕ್ತದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಉದ್ವೇಗ ಹಾಗೂ ಖಿನ್ನತೆಯನ್ನು ನಿಯಂತ್ರಣದಲ್ಲಿಡುತ್ತದೆ. ಸಂಧಿವಾತ ನೋವನ್ನು ಕಡಿಮೆ ಮಾಡುವುದಲ್ಲದೆ ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ಇದೆಲ್ಲದರ ಜೊತೆಗೆ ಹಲವು ಬಗೆಯ ಕ್ಯಾನ್ಸರ್ ಬಾರದಂತೆ ತಡೆಯುತ್ತದೆ.

ಕೆಲವರು ಈ ಬೀಜವನ್ನು ರುಚಿಗಾಗಿ ತಿನ್ನುತ್ತಾರೆಯೇ ವಿನಃ ಅದರ ಪ್ರಯೋಜನಕಾರಿ ಅಂಶಗಳನ್ನು ತಿಳಿದಿರುವುದಿಲ್ಲ. ಕುಂಬಳಕಾಯಿ ಬೀಜದಲ್ಲಿರುವ ಸತುವಿನ ಅಂಶ ಸಂಧಿವಾತದ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ. ಇದರಲ್ಲಿರುವ ಪೈಥೋಸ್ಟೆರಾಲ್ ಅಂಶವು ಅಧಿಕ ಕೊಲೆಸ್ಟ್ರಾಲ್‍ಅನ್ನು ಕಡಿಮೆಗೊಳಿಸುತ್ತದೆ. ಸಾಮಾನ್ಯವಾಗಿ ಮಧುಮೇಹಿಗಳನ್ನು ಕಾಡುವ ಕಿಡ್ನಿ ಸಮಸ್ಯೆ ತಡೆಗಟ್ಟಲು ಕುಂಬಳಬೀಜ ಶಕ್ತವಾಗಿದೆ. ಹಾಗಾಗಿ ಸಿಹಿಕುಂಬಳಕಾಯಿ ತಿನ್ನದಿದ್ದರೂ ಬೀಜವನ್ನು ಧಾರಾಳವಾಗಿ ಸೇವಿಸಬಹುದು.

ಆರೋಗ್ಯಕರ ಆಹಾರ ಸೇವನೆಯೇ ಇಂದಿನ ಮಕ್ಕಳ ಪ್ರಮುಖ ಸಮಸ್ಯೆ. ಕುಂಬಳಬೀಜ ರುಚಿಕರವಾಗಿರುವುದರಿಂದ ಮಕ್ಕಳಿಗೂ ಇಷ್ಟವಾಗುತ್ತದೆ. ಜೊತೆಗೆ ಪೋಷಕಾಂಶದ ಕೊರತೆ ಉಂಟಾಗುವುದನ್ನು ತಡೆಗಟ್ಟಬಹುದು. ಶಕ್ತಿವರ್ಧಕವೆನಿಸಿರುವ ಕುಂಬಳಬೀಜ ವ್ಯಾಯಾಮಕ್ಕೆ ಮುನ್ನ ಸೇವಿಸುವ ಸೂಪರ್‍ಫುಡ್‍ಗಳಲ್ಲಿ ಒಂದು.

*ಹೃದಯದ ಆರೋಗ್ಯವನ್ನು ಕಾಪಾಡುವಷ್ಟು ಸಾಮಥ್ರ್ಯ ಕುಂಬಳಬೀಜಕ್ಕಿದ್ದು ಹೃದಯ ಬಡಿತವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ.*

No comments:

SATISH BLOGGES

N Dog

Hi, get 6 Rs directly to your Paytm account without threshold. It's easy and simple, click here to get. 👉 👉 http://ndog.co/q/h5c73o/?...